Telegram Join My Telegram WhatsApp Join My WhatsApp

ಆರ್‌ಟಿಇ ಕರ್ನಾಟಕ ಪ್ರವೇಶ 2026-27

RTE ಅಂದ್ರೆ Right to Education. ಖಾಸಗಿ ಶಾಲೆಯಲ್ಲಿ 25% ಸೀಟ್‌ಗಳನ್ನು ಬಡ ಕುಟುಂಬದ ಮಕ್ಕಳಿಗೆ ಉಚಿತವಾಗಿ ಕೊಡುವ ಯೋಜನೆ.

1. ಮುಖ್ಯ ದಿನಾಂಕಗಳು 2026-27

ಚಟುವಟಿಕೆ ದಿನಾಂಕ ಅರ್ಜಿ ಸಲ್ಲಿಕೆ – 21 ಏಪ್ರಿಲ್ ರಿಂದ 17 ಮೇ 2026

ಟ್ರಯಲ್/ಮಾಕ್ ಪ್ರಾಕ್ಟೀಸ್ – 18-19 ಏಪ್ರಿಲ್ 2026

ಅರ್ಜಿ ಪರಿಶೀಲನೆ – 22 ಏಪ್ರಿಲ್ ರಿಂದ 18 ಮೇ 2026

ಅಂತಿಮ ಪಟ್ಟಿ – 22 ಮೇ 2026

1ನೇ ಸುತ್ತಿನ ಲಾಟರಿ – 25 ಮೇ 2026

1ನೇ ಸುತ್ತಿನ ದಾಖಲಾತಿ – 26 ಮೇ ರಿಂದ 8 ಜೂನ್ 2026

2ನೇ ಸುತ್ತಿನ ಲಾಟರಿ – 12 ಜೂನ್ 2026

2ನೇ ಸುತ್ತಿನ ದಾಖಲಾತಿ – 13 ಜೂನ್ ರಿಂದ 19 ಜೂನ್ 2026

2. ಯಾರು ಅರ್ಜಿ ಹಾಕಬಹುದು? – ಅರ್ಹತೆ

ತರಗತಿ: LKG/ಪ್ರಿ-ಪ್ರೈಮರಿ ಅಥವಾ 1ನೇ ತರಗತಿ ಮಾತ್ರ

ಆದಾಯ: BPL ಕುಟುಂಬ, ವಾರ್ಷಿಕ ಆದಾಯ ಮಿತಿ ಇರುತ್ತೆ. SC/ST/OBC/ಅಲ್ಪಸಂಖ್ಯಾತ, ವಿಶೇಷ ಚೇತನ ಮಕ್ಕಳಿಗೆ ಆದ್ಯತೆ

ವಯಸ್ಸು: 1ನೇ ತರಗತಿಗೆ 6 ವರ್ಷ ಪೂರ್ಣವಾಗಿರಬೇಕು. LKGಗೆ 3 ವರ್ಷ 10 ತಿಂಗಳು

ವಾಸ: ಮಗು ಸೇರಬೇಕಾದ ಶಾಲೆಯಿಂದ 1 ಕಿ.ಮೀ ಒಳಗೆ ವಾಸ ಇರಬೇಕು. ವಾರ್ಡ್/ಗ್ರಾಮ ಮಿತಿ ಅನ್ವಯ

3. ಅರ್ಜಿ ಹಾಕುವುದು ಹೇಗೆ – ಸ್ಟೆಪ್ ಬೈ ಸ್ಟೆಪ್

ವೆಬ್‌ಸೈಟ್: schooleducation.karnataka.gov.in ಗೆ ಹೋಗಿ “RTE Admissions” ಸೆಕ್ಷನ್ ಕ್ಲಿಕ್ ಮಾಡಿ

ರಿಜಿಸ್ಟರ್: ಮಗುವಿನ ಹೆಸರು, ಜನ್ಮ ದಿನಾಂಕ, ಪೋಷಕ ಮೊಬೈಲ್ ನಂಬರ್ ಹಾಕಿ. OTP ಬರುತ್ತೆ, ವೆರಿಫೈ ಮಾಡಿ

ಅಪ್ಲಿಕೇಶನ್ ID: ಪಾಸ್‌ವರ್ಡ್ ಕ್ರಿಯೇಟ್ ಮಾಡಿ. ನಿಮಗೆ ಒಂದು ಅಪ್ಲಿಕೇಶನ್ ID ಸಿಗುತ್ತೆ, ಸೇವ್ ಮಾಡಿಡಿ

ಲಾಗಿನ್ ಆಗಿ ಫಾರ್ಮ್ ಭರ್ತಿ: LKG ಅಥವಾ Class 1 ಸೆಲೆಕ್ಟ್ ಮಾಡಿ. 17 ಏಪ್ರಿಲ್ 2026ಕ್ಕೆ ಪ್ರಕಟವಾಗುವ ಹತ್ತಿರದ ಶಾಲೆಗಳ ಲಿಸ್ಟ್‌ನಿಂದ ಶಾಲೆ ಆಯ್ಕೆ ಮಾಡಿ

ದಾಖಲೆ ಅಪ್‌ಲೋಡ್: ಆಧಾರ್, ಜನನ ಪ್ರಮಾಣ ಪತ್ರ, ಜಾತಿ/ಆದಾಯ ಪ್ರಮಾಣ ಪತ್ರ, ವಿಳಾಸ ದೃಢೀಕರಣ, BPL ಕಾರ್ಡ್, ಮಗುವಿನ ಫೋಟೋ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ

ಸಲ್ಲಿಸಿ: ಎಲ್ಲಾ ವಿವರ ಚೆಕ್ ಮಾಡಿ 17 ಮೇ 2026 ರ ಮೊದಲು ಸಬ್ಮಿಟ್ ಮಾಡಿ. ಅರ್ಜಿ ಪ್ರಿಂಟ್ ತೆಗೆದಿಡಿ

4. ಆಯ್ಕೆ ಹೇಗೆ?

ಸಂಪೂರ್ಣ ಕಂಪ್ಯೂಟರ್ ಆಧಾರಿತ ಆನ್‌ಲೈನ್ ಲಾಟರಿ ಮೂಲಕ. ಯಾವುದೇ ಶಿಫಾರಸು, ದುಡ್ಡು ನಡೆಯಲ್ಲ. ಲಾಟರಿಯಲ್ಲಿ ಸೆಲೆಕ್ಟ್ ಆದರೆ SMS ಬರುತ್ತೆ. ನಂತರ ಮೂಲ ದಾಖಲೆಗಳೊಂದಿಗೆ ಶಾಲೆಗೆ ಹೋಗಿ ದಾಖಲಾತಿ ಮಾಡಿಸಬೇಕು.

5. ಬೇಕಾದ ದಾಖಲೆಗಳು

  • ಮಗುವಿನ ಆಧಾರ್ ಕಾರ್ಡ
  • ಜನನ ಪ್ರಮಾಣ ಪತ್ರ
  • ಪೋಷಕರ ಆಧಾರ್ ಕಾರ್ಡ
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ/BPL ರೇಶನ್ ಕಾರ್ಡ್
  • ವಿಳಾಸ ದೃಢೀಕರಣ – ವಿದ್ಯುತ್ ಬಿಲ್/ಬಾಡಿಗೆ ಕರಾರು
  • ಮಗುವಿನ ಪಾಸ್‌ಪೋರ್ಟ್ ಸೈಜ್ ಫೋಟೋ

 

Read More: ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ – 890 ಹುದ್ದೆಗಳು 

Apply Link